ಓಂ ಶ್ರೀಂ ದಕ್ಷಿಣ ನಾಗ ಕಾಳಿಕ ರಕ್ಷಃ ರಕ್ಷಃ ಜಗನ್ಮಾತ್ಯೈ ನಮಃ
ನಂಜನಗೂಡಿನ ಹತ್ತಿರದ ಗೋಳೂರು ಗ್ರಾಮದಲ್ಲಿ ಜಗನ್ಮಾತ ಶ್ರೀ ದಕ್ಷಿಣ ನಾಗ ಕಾಳಿಕ ಅಮ್ಮನವರ ಶಕ್ತಿ ಪೀಠವನ್ನು ತಾಯಿಯು ಕನಸಿನಲ್ಲಿ ಆದೇಶಿಸಿದಂತೆ ಶ್ರೀ ಚಕ್ರ ಸಹಿತ ದಕ್ಷಿಣ ನಾಗ ಕಾಳಿಕ ದೇವಿಯನ್ನು ಪ್ರತಿಷ್ಠಾಪಿಸುವ ಪ್ರಯತ್ನವನ್ನು ಪ್ರಸ್ತುತ ಕೈಗೊಂಡಿರುತ್ತೇವೆ.
ಈ ದಿವ್ಯ ಸ್ಥಾನದಲ್ಲಿ ದೇವಾಲಯವನ್ನು ನಿರ್ಮಿಸಲು ದಿ. 1-5-2021 ರಂದು ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ಇಲ್ಲಿ ತಾಯಿಯ ಕನಸಿನ ಆದೇಶದಂತೆ ಶ್ರೀ ದಕ್ಷಿಣ ನಾಗ ಕಾಳಿಕ ದೇವಿ, ಹಾಗೂ ಮುನೇಶ್ವರ ಸ್ವಾಮಿ, ಗಣಪತಿ ಸುಬ್ರಹ್ಮಣ್ಯ ದೇವತಾ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದೆ.
ಸ್ಥಳ ಚರಿತ್ರೆ
ಶ್ರೀ ಗುರುಭ್ಯೋ ನಮಃ
ಗುರು ಪರಂಪರೆ
ಶ್ರೀ ದಕ್ಷಿಣ ನಾಗ ಕಾಳಿಕ ಅಮ್ಮನವರ ಶಕ್ತಿಪೀಠ ಟ್ರಸ್ಟ್ (ರಿ).
ಭಕ್ತರ ಗಮನಕ್ಕೆ ...
ನಮಸ್ಕಾರ, ನನ್ನ ಹೆಸರು ಕೃಪ ತ್ರಿನೇಶ್.
ತಾಯಿ ಶ್ರೀ ದಕ್ಷಿಣ ನಾಗ ಕಾಳಿಕ ದೇವಿಯ ಅನುಗ್ರಹದಂತೆ ತಮ್ಮೆಲ್ಲರಿಗೆ ನನ್ನ ಕಿರು ಪರಿಚಯವನ್ನು ಮಾಡಿಕೊಳ್ಳಲು ಬಯಸುತ್ತೇನೆ…
ನಾನು 1980 ರಲ್ಲಿ ಕೊಡಗಿನ ಪೊನ್ನಂಪೇಟೆಯಲ್ಲಿ ಮಹಾದೇವಿ ಮತ್ತು ನಾರಾಯಣ ರವರ ಹಿರಿಯ ಪುತ್ರಿಯಾಗಿ ಜನಿಸಿದೆ. ತಾಯಿ ಶ್ರೀ ದಕ್ಷಿಣ ನಾಗ ಕಾಳಿಕ ದೇವಿಯ ನಿಶ್ಚಯದಂತೆ ನನ್ನ ಮದುವೆ ಶಾರದಮ್ಮ ಮತ್ತು ನೀಲಕಂಠಪ್ಪನವರ ಸುಪುತ್ರ ಶ್ರೀ ತ್ರಿನೇಶ್ ಅವರೊಡನೆ 2001 ರಲ್ಲಿ ನಡೆಯಿತು.
ಎಲ್ಲರಂತೆ ನಾನು ಕೂಡ ದೇವರನ್ನು ನಂಬುತ್ತಾ ಸಾಮಾನ್ಯರಂತೆ ಬದುಕಿದವಳು. ನಂಜನಗೂಡಿನ ಪರಶುರಾಮಪುರ (ಗೋಳೂರು) ಗ್ರಾಮದಲ್ಲಿ ನಾವು ರೂಡಿಸಿಕೊಂಡು ಬಂದ ವ್ಯವಸಾಯ ಭೂಮಿಯಿದೆ. ಕಳೆದ 5 ವರ್ಷಗಳ ಹಿಂದೆ, ತಾಯಿಯು ಕನಸಿನ ಮುಖಾಂತರ ನನಗೊಂದು ನೆಲೆ ಕೊಡು ಎಂದು ಹೇಳಿದ ಹಾಗಾಯಿತು. ನಂತರ ಇದೇ ವ್ಯವಸಾಯದ ಭೂಮಿಯಲ್ಲಿ ಒಂದು ಹುತ್ತವು ಮೂಡಿರುವುದನ್ನುನಾವು ಗಮನಿಸುತ್ತಾ ಬಂದೆವು.ಇದಾದ ಕೆಲವೇ ದಿನಗಳಲ್ಲಿ ತಾಯಿಯು ಕನಸಿನಲ್ಲಿ ಬಂದು, ನಾನು ಇಲ್ಲಿ ಮೂಡಿರುವೆ ಬಾ ಎಂದು ಕರೆದ ಅನುಭವ ಆಯಿತು. ಅವಳ ಅಣತಿಯಂತೆ ಕುಟುಂಬ ಸಮೇತರಾಗಿ ಇಲ್ಲಿಯವರೆಗೆ ಯತಾಶಕ್ತಿ ಪೂಜೆ ಮಾಡಿಕೊಂಡು ನೆಮ್ಮದಿಯನ್ನು ಕಂಡುಕೊಂಡಿದ್ದೇವೆ. ನಾನು ದೊಡ್ಡ ಜ್ಯೋತಿಷಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ತಾಯಿಯ ದಯೆಯಿಂದ ಹಲವು ಗುರುಗಳಿಂದ ಜ್ಯೋತಿಷ್ಯ ವಿಧ್ಯೆಯ ಕಲಿಕೆಯಾಗಿದೆ. ದೇವಿಯ ಸೂಚನೆಯಂತೆ ನನ್ನಲ್ಲಿ ಪರಿಹಾರ ಕೇಳಿ ಬಂದವರಿಗೆ ಜ್ಯೋತಿಷ್ಯದ ಮುಖಾಂತರ ಪರಿಹಾರ ಹಾಗು ಸರಿಯಾದ ಸಮಾಧಾನದ ಮಾರ್ಗದರ್ಶನ ನೀಡುತ್ತಾ ಬಂದಿದ್ದೇನೆ.
ವಿಶೇಷವಾಗಿ ದಕ್ಷಿಣ ದಿಕ್ಕಿಗೆ ತನ್ನ ಮುಖ ಮಾಡಿ ನೆಲೆಸಿರುವ ಕಾಳಿಕ ಮಾತೆಯು ಅನೇಕ ರೂಪದಲ್ಲಿ ನಂಬಿದ ಭಕ್ತರ ಸಲಹಿ ಕಾಪಾಡುವ ಪವಾಡಗಳನ್ನು ಈ ಹಿಂದೆ ಅನೇಕ ಕಡೆ ನಾವು ನೋಡಿದ್ದೇವೆ. ಹಾಗೆಯೆ ನಾನು ಪೂಜಿಸಿ ನಂಬಿರುವ ಶ್ರೀ ದಕ್ಷಿಣ ನಾಗ ಕಾಳಿಕ ಅಮ್ಮನವರು ಭಕ್ತರಿಗೆ ಅಭಯವನ್ನು ನೀಡುತ್ತ ಅವರ ಧನಾತ್ಮಕ ಬೇಡಿಕೆಗಳನ್ನು ಈಡೇರಿಸಿ ಶ್ರೀರಕ್ಷೆಯಾಗಿ ನಿಂತಿದ್ದಾಳೆ ಎಂಬುದಕ್ಕೆ ನನ್ನ ಅನುಭವವೇ ಸಾಕ್ಷಿಯಾಗಿದೆ. ತಾಯಿ ನೆಲೆಸಿರುವ ಸ್ಥಳದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಂದು ಗಣಪತಿ ಪೂಜೆ, ಚಂಡಿಕ ಪಾರಾಯಣ ಮತ್ತು ನಾಗ ನಾಮ ಪಾರಾಯಣವನ್ನು ಮಾಡುತ್ತಾ ಬರುತ್ತಿದ್ದೇವೆ.
ತಾಯಿಯ ಅಭಯದಿಂದ ಈ ಶಕ್ತಿ ಸ್ಥಳಕ್ಕೆ ಬಂದವರು ಸರ್ಪದೋಷ, ವಿವಾಹದ ಸಮಸ್ಯೆ, ಸಂತಾನದ ಸಮಸ್ಯೆ, ಕೆಲಸದಲ್ಲಿ ಅಡಚಣೆ, ಭೂಮಿಗೆ ಸಂಬಂದಿಸಿದ ವಿಷಯಗಳು, ದುಷ್ಟ ದೃಷ್ಟಿ ದೋಷ, ಸಾಲಬಾಧೆ, ಮಾಂತ್ರಿಕ ಪ್ರಯೋಗದ ಬಾಧೆ, ಭಾನಾಮತಿ ಪ್ರಯೋಗದ ಬಾಧೆ, ಹಾಗು ನಾನಾ ಬಗೆಯ ಅಮಾನುಷ ಶಕ್ತಿಗಳ ತೊಂದರೆಗಳಿಂದ ಪರಿಹಾರ ಕಂಡುಕೊಂಡು ನೆಮ್ಮದಿಯಾಗಿದ್ದಾರೆ.
ತಾಯಿಯು ಕನಸಿನಲ್ಲಿ ಆದೇಶಿಸಿದಂತೆ ಶ್ರೀ ಚಕ್ರ ಸಹಿತ ದಕ್ಷಿಣ ನಾಗ ಕಾಳಿಕ ದೇವಿಯನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ, ಇಲ್ಲಿ ಮೂಡಿಬಂದಿರುವ ಹುತ್ತವನ್ನು ದೇವಾಲಯವಾಗಿ ಮಾಡುವ ಪ್ರಯತ್ನವನ್ನು ಪ್ರಸ್ತುತ ಕೈಗೊಂಡಿರುತ್ತೇವೆ. ಆ ಮಹಾ ತಾಯಿಯ ಕನಸಿನ ಆದೇಶದಂತೆ ದೇವಾಲಯವನ್ನು ನಿರ್ಮಿಸಲು ದಿನಾಂಕ 1-5-2021 ರಂದು ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ಅದರಂತೆ ಇಲ್ಲಿ ಶ್ರೀ ದಕ್ಷಿಣ ನಾಗ ಕಾಳಿಕ ದೇವಿ, ನಾಗದೇವರು, ಮುನೇಶ್ವರ ಸ್ವಾಮಿ, ಗಣಪತಿ, ಸುಬ್ರಹ್ಮಣ್ಯ, ಲಕ್ಷ್ಮಿವೆಂಕಟೇಶ್ವರ ಹಾಗು ಆಂಜನೇಯ ದೇವತಾ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದೆ. ಎಲ್ಲ ದೇವ ಭಕ್ತರ, ಮನೆಯವರ ಸಹಕಾರ ಹಾಗು ಆಸೆಯಂತೆ ದೇವಸ್ಥಾನವನ್ನು ಪ್ರತಿಷ್ಠಾಪಿಸಲಾಗುವುದು. ಆ ದೇವಿಯ ಕೃಪೆಯು ಸದಾ ಎಲ್ಲರಿಗೂ ಸಿಗುವಂತಾಗಲಿ ಎಂದು ಆಶಿಸುತ್ತೇನೆ.
ಶ್ರೀರಕ್ಷಾ
ತಾಯಿಯ ಅಭಯದಿಂದ ಈ ಶಕ್ತಿ ಸ್ಥಳಕ್ಕೆ ಬಂದವರು ಸರ್ಪದೋಷ, ವಿವಾಹದ ಸಮಸ್ಯೆ, ಸಂತಾನದ ಸಮಸ್ಯೆ, ಕೆಲಸದಲ್ಲಿ ಅಡಚಣೆ, ಭೂಮಿಗೆ ಸಂಬಂದಿಸಿದ ವಿಷಯಗಳು, ದುಷ್ಟ ದೃಷ್ಟಿ ದೋಷ, ಸಾಲಬಾಧೆ, ಮಾಂತ್ರಿಕ ಪ್ರಯೋಗದ ಬಾಧೆ, ಭಾನಾಮತಿ ಪ್ರಯೋಗದ ಬಾಧೆ, ಹಾಗು ನಾನಾ ಬಗೆಯ ಅಮಾನುಷ ಶಕ್ತಿಗಳ ತೊಂದರೆಗಳಿಂದ ಪರಿಹಾರ ಕಂಡುಕೊಂಡು ನೆಮ್ಮದಿಯಾಗಿದ್ದಾರೆ.
ತಾಯಿಯ ಅನುಗ್ರಹದಿಂದ ಈ ಕ್ಷೇತ್ರದಲ್ಲಿ ಯಾರಿಗೆ ಅಗತ್ಯವಿದೆಯೋ ಅವರಿಗೆ ಸರ್ಪ ಸಂಸ್ಕಾರ ಶಾಂತಿ, ಆಶ್ಲೇಷ ಬಲಿ, ಕುಜ ದೋಷ ಶಾಂತಿ, ರಾಹು ಶಾಂತಿ, ಗ್ರಹ ಸಂಧಿ ಶಾಂತಿಗಳ ಪೂಜೆಗಳನ್ನು ಸಾಂಗವಾಗಿ ನಡೆಸಲು ವ್ಯವಸ್ಥೆಯನ್ನು ಮಾಡಲಾಗುವುದು. ನಾಗರಕಲ್ಲಿನ ಪ್ರತಿಷ್ಠಾಪನೆಗೆ ಸ್ಥಳವನ್ನು ನೀಡಲಾಗುವುದು.
ಬೆಂಬಲ
ತಾಯಿಯ ಅನುಗ್ರಹದಿಂದ ಈ ಕ್ಷೇತ್ರದಲ್ಲಿ ಯಾರಿಗೆ ಅಗತ್ಯವಿದೆಯೋ ಅವರಿಗೆ ಸರ್ಪ ಸಂಸ್ಕಾರ ಶಾಂತಿ, ಆಶ್ಲೇಷ ಬಲಿ, ಕುಜ ದೋಷ ಶಾಂತಿ, ರಾಹು ಶಾಂತಿ, ಗ್ರಹ ಸಂಧಿ ಶಾಂತಿಗಳ ಪೂಜೆಗಳನ್ನು ಸಾಂಗವಾಗಿ ನಡೆಸಲು ವ್ಯವಸ್ಥೆಯನ್ನು ಮಾಡಲಾಗುವುದು. ನಾಗರಕಲ್ಲಿನ ಪ್ರತಿಷ್ಠಾಪನೆಗೆ ಸ್ಥಳವನ್ನು ನೀಡಲಾಗುವುದು.
ಜಗನ್ಮಾತೆಯು ತನಗೊಂದು ದೇವಾಲಯವನ್ನು ಭಕ್ತರ ಮೂಲಕ ಕಟ್ಟಿಸಿಕೊಳ್ಳುವೆನೆಂದು ನಮಗೆ ಹಲವು ಬಾರಿ ಕನಸಿನಲ್ಲಿ ಸೂಚಿಸಿದ್ದಾಳೆ. ಅದರಂತೆ ಶಕ್ತ್ಯಾನುಸಾರ ನಮ್ಮಲ್ಲಿದ್ದ ಸಂಪನ್ಮೂಲಗಳನ್ನು ಬಳಸಿ ಈಗಾಗಲೆ ಕಟ್ಟಡದ ಕಾರ್ಯಾರಂಭ ಮಾಡಲಾಗಿದೆ. ಭವ್ಯ ಮಂದಿರವಲ್ಲದಿದ್ದರೂ ಸರಳ ಗುಡಿಯ ಕಟ್ಟುವ ಕಾರ್ಯಗಳಿಗೆ ತಮ್ಮ ಶಕ್ತ್ಯಾನುಸಾರ ಕೊಡುಗೆ ನೀಡಿ, ದೇವಾಲಯದ ನಿರ್ಮಾಣ ಕಾರ್ಯದಲ್ಲಿ ತಮ್ಮ ಭಕ್ತಿಯ ಸೇವೆಯನ್ನು ಸಾಕಾರಗೊಳಿಸಿ, ಈ ಮಹತ್ತರ ಕಾರ್ಯದಲ್ಲಿ ನಮಗೆ ಸಹಾಯ ಮಾಡಬೇಕೆಂದು ಅರಿಕೆ ಮಾಡಿಕೊಳ್ಳುತ್ತೇವೆ.
ವಿಶೇಷ ಸೂಚನೆ: ಸಹಾಯ ಮಾಡಿದವರಿಗೆ ರಸೀತಿ ದಾಖಲೆ ನೀಡಲಾಗುವುದು. ಸಂದಾಯವಾದ ಎಲ್ಲಾ ಹಣವು ದೇವಾಲಯದ ಕಟ್ಟಡದ ಕಾರ್ಯಗಳಿಗೆ ಮಾತ್ರ ಉಪಯೋಗಿಸಲಾಗುವುದು.
ನಮ್ಮ ಟ್ರಸ್ಟ್
Account number : 40645832700
State Bank of India
JSS College Branch, Mysore.
IFSC Code: SBIN0040249
ಸಹಾಯದ ನಿರೀಕ್ಷೆಯಲ್ಲಿ....
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7019806595
ಇಂತಿ
ಶ್ರೀಮತಿ ಕೃಪಾ
ಮೈಸೂರು, ನಂಜನಗೂಡು
ಸಂಪರ್ಕಿಸಿ
Copyright - Sri Dakshina Naga Kalika Ammanavara Shakthi Peeta Trust 2023